ಮೈಸೂರು ಅಭಿವೃದ್ಧಿ ಪ್ರಾಧಿಕಾರವು ನಮಗೆ ನೀಡಿದ ವಿಶಾಲವಾದ
ನಿವೇಶನದಲ್ಲಿ ನಮ್ಮ ಭಾರತೀಯ ಸಂಸೃತಿಯ ಹಿನ್ನೆಲೆಯಲ್ಲಿ
ಒಂದು ವಿದ್ಯಾಲಯವನ್ನು ಸ್ಥಾಪಿಸುವ ಕಲ್ಪನೆಯು ನಮ್ಮಲ್ಲಿ
ಒಡಮೂಡಿತು. ಅನೇಕ ದಾನಿಗಳು ಹಾಗೂ ಕಾರ್ಯಕರ್ತರ
ಸಹಕಾರದಿಂದ ಈ ಕಲ್ಪನೆಯು ಸಾಕಾರಗೊಳ್ಳಲು ಸಾಧ್ಯವಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಬೇಕು
ಜೊತೆಗೆ ನಮ್ಮ ಸಂಸ್ಕೃತಿಯ ಪರಿಕಲ್ಪನೆಯೂ ಅವರಲ್ಲಿ
ಮೂಡಿಬರಬೇಕೆಂಬುದೇ ನಮ್ಮ ಆಕಾಂಕ್ಷೆಯಾಗಿತ್ತು.
ಅದರಂತೆ ಶಿಕ್ಷಕರ ಮತ್ತು ಸಂಸ್ಥೆಯ ಆಡಳಿತವರ್ಗದ
ವಿಶೇಷಪ್ರಯತ್ನದಿಂದ ಈ ಸಂಸ್ಥೆಯು ಶೈಕ್ಷಣಿಕ ಪ್ರಗತಿಯಲ್ಲಿ ಉತ್ತಮ
ಸಾಧನೆಯನ್ನು ಮಾಡಿ ಆದರ್ಶವಿದ್ಯಾಸಂಸ್ಥೆಯಾಗಿ ಬೆಳಗುತ್ತಿರುವುದು
ನಮಗೆ ಸಂತಸವನ್ನುಂಟುಮಾಡಿದೆ. ಜನತೆಯ ಸಹಕಾರದಿಂದ ಮತ್ತು
ಶಿಕ್ಷಕರ ಹಾಗೂ ಕಾರ್ಯಕರ್ತರ ಸಾಧನೆಯಿಂದ ಈ ಸಂಸ್ಥೆಯು ಇದೇ
ಮಟ್ಟವನ್ನು ಉಳಿಸಿಕೊಂಡು ಬೆಳೆಯುತ್ತಿರಲೆಂದು ನಾವು ಹಾರೈಸುತ್ತೇವೆ.
ಇತಿ ಸಪ್ರೇಮನಾರಾಯಣಸ್ಮರಣೆಗಳು,